Wednesday, April 8, 2009


ಬಸವ ಯುಗ
ಬಸವೇಶ್ವರನಿಂದ ಕುಮಾರವ್ಯಾಸನವರೆಗೆ ಅಂದರೆ ೧೨ನೆಯ ಶತಮಾನದ ಮಧ್ಯದಿಂದ ೧೫ನೆಯ ಶತಮಾನದವರೆಗೆ ಈ ಯುಗದ ಹರವಿದೆ. ಅನೇಕ ದೃಷ್ಟಿಯಿಂದ ಈ ಯುಗಕ್ಕೆ ವೈವಿಧ್ಯವಿದೆ, ವೈಶಿಷ್ಟ್ಯವಿದೆ. ಈವರೆಗೆ ಜೀವನ ಮತ್ತು ಸಾಹಿತ್ಯಗಳು ಹೆಚ್ಹಾಗಿ ಪರಂಪರಾಗತವಾಗಿದ್ದುವು. ರೂಡಿ ಎಂಬ ಸ್ಥಾಯಿಗೆ ವ್ಯತ್ಯಾಸವು ಸಂಚಾರಿಯಾಗಿತ್ತು. ಈ ಯುಗದಲ್ಲಿ ವ್ಯತ್ಯಾಸವೆಂಬ ಸ್ಥಾಯಿಗೆ ರೂಡಿ ಸಂಚಾರಿಯಾದಂತಾಯಿತು. ಧಾರ್ಮಿಕ - ಸಾಮಾಜಿಕ ಜೀವನದಲ್ಲಿ ಮುಲಭೂತವಾದ ವ್ಯತ್ಯಾಸಗಳು, ಅದಕ್ಕೆ ವಿರೋಧಕವಾದ ಪ್ರತಿಕ್ರಿಯೆಗಳು, ಸಂಘರ್ಷ - ಸಾಮರಸ್ಯಗಳು ತಲೆದೋರಿ ಕನ್ನಡ ಸಾಹಿತ್ಯದ ಮೇಲೆ ಆಳವಾದ ವರ್ಚಸ್ಸು ಬೀರಿದವು. ಹೊಸ ಬಗೆಯ ಆಧ್ಯಾತ್ಮಿಕ ತೇಜಸ್ಸು, ಧಾರ್ಮಿಕ ಶ್ರದ್ಧೆ, ಪ್ರಯೋಗಬುದ್ದಿಗಳು ಕಂಡು ಬಂದವು, ಪಂಡಿತ ಕವಿಗಳ ಜೊತೆಗೆ ಅನೇಕ ಆಧ್ಯಾತ್ಮಿಗಳೂ ಅನುಭಾವಿಗಳೂ ಸಾಹಿತ್ಯ ನಿರ್ಮಾತರಾದರು. ಈ ಹೊಸ ನಿರ್ಮಾತೃಗಳ ನೆರವಿಗೆ ಭಕ್ತಿಭಂಡಾರಿಯೂ ಯುಗಪುರುಷನೂ ಆದ ಬಸವೆಶ್ವರನು ಮುಂದಾಳುವಾದನು.

ಈ ಯುಗದ ಪ್ರಮುಖ ಗ್ರಂಥಕಾರರು :


೧. ಪ್ರಭುದೇವ (ಅಲ್ಲಮ) : ಕಾಲ : ಸುಮಾರು ೧೧೫೦, ಮತ : ವೀರಶೈವ, ಗ್ರಂಥ: ಷಟ್ಸ್ಥಲಜ್ಞಾನಚಾರಿತ್ರ ಹಾಗು ಬೇರೆ ವಚನಗಳು.
೨. ಸಕಲೇಶ ಮಾದರಸ : ಕಾಲ : ಸುಮಾರು ೧೧೫೦, ಮತ : ವೀರಶೈವ, ಗ್ರಂಥ: ಮಂತ್ರಗೊಪ್ಯ
೩. ಬಸವೇಶ್ವರ : ಕಾಲ : ಸುಮಾರು ೧೧೫೦, ಮತ : ವೀರಶೈವ, ಗ್ರಂಥ : ಷಟ್ಸ್ಥಲವಚನ ಹಾಗು ಬೇರೆ ವಚನಗಳು; ಕಾಲಜ್ಞಾನವಚನ
೪. ಚನ್ನಬಸವ : ಕಾಲ : ಸುಮಾರು ೧೧೫೦, ಮತ : ವೀರಶೈವ, ಗ್ರಂಥ: ಷಟ್ಸ್ಥಲವಚನ ಹಾಗು ಬೇರೆ ವಚನಗಳು; ಕರಣಹಸುಗೆ; ಮಿಶ್ರಾರ್ಪಣ; ಮಂತ್ರಗೋಪ್ಯ; ಕಾಲಜ್ಞಾನ; ರುಧ್ರಭಾರತದ ದೃಷ್ಟಿ.
೫. ಸಿದ್ಧರಾಮ : ಕಾಲ : ಸುಮಾರು ೧೧೫೦, ಮತ : ವೀರಶೈವ, ಗ್ರಂಥ: ವಚನಗಳು; ಮಿಶ್ರಸ್ತೋತ್ರದತ್ರಿವಿಧಿ; ಬಸವಸ್ತೋತ್ರತ್ರಿವಿಧಿ; ಅಷ್ಟಾವರಣಸ್ತೋತ್ರತ್ರಿವಿಧಿ; ಕಾಲಜ್ಞಾನ; ಮಂತ್ರಗೋಪ್ಯ.

೬. ಮಹಾದೇವಿಯಕ್ಕ : ಕಾಲ : ಸುಮಾರು ೧೧೫೦, ಮತ : ವೀರಶೈವ, ಗ್ರಂಥ: ವಚನಗಳು, ಯೋಗಾಂಗತ್ರಿವಿಧಿ, ಸೃಷ್ಟಿಯ ವಚನ, ಅಕ್ಕಗಳ ಪೀಠಿಕೆ, ಅಕ್ಕನ ಹಾಡುಗಳು
೭. ಮಲ್ಲಿಕಾರ್ಜುನ ಪಂಡಿತಾರಾಧ್ಯ : ಕಾಲ : ಸುಮಾರು ೧೧೬೦ , ಮತ : ವೀರಶೈವ, ಗ್ರಂಥ: ವಚನಗಳು; ಗಣಸಹಸ್ರನಾಮ; ಇಷ್ಟಲಿಂಗಸ್ತೋತ್ರ; ಬಸವಗೀತ
೮. ಹರಿಹರ : ಕಾಲ : ಸುಮಾರು ೧೨೦೦, ಮತ : ವೀರಶೈವ, ಗ್ರಂಥ : ಗಿರಿಜಾಕಲ್ಯಾಣ; ಪಂಪಾಶತಕ; ರಕ್ಷಾಶತಕ; ಮುಡಿಗೆಯ ಅಷ್ಟಕ; ಶಿವಗಣದ ರಗಳೆಗಳು.
೯. ಕೆರೆಯ ಪದ್ಮರಸ : ಕಾಲ : ಸುಮಾರು ೧೨೦೦, ಮತ : ವೀರಶೈವ, ಗ್ರಂಥ : ದೀಕ್ಷಾಬೋಧೆ
೧೦. ರಾಘವಾಂಕ : ಕಾಲ : ಸುಮಾರು ೧೨೨೫, ಮತ : ವೀರಶೈವ, ಗ್ರಂಥ: ಹರಿಶ್ಚಂದ್ರ ಚಾರಿತ್ರ, ಸಿದ್ಧರಾಮ ಚಾರಿತ್ರ, ವೀರೇಶ್ವರಚರಿತೆ, ಸೋಮನಾಥಚಾರಿತ್ರ, ಶರಭ ಚಾರಿತ್ರ, ಹರಿಹರ ಮಹತ್ವ.
೧೧. ನೇಮಿಚಂದ್ರ : ಕಾಲ : ಸುಮಾರು ೧೨೦೦, ಮತ : ಜೈನ, ಗ್ರಂಥ : ಲೀಲಾವತಿ, ನೇಮಿನಾಥಪುರಾಣ.
೧೨. ರುಧ್ರಭಟ್ಟ : ಕಾಲ : ಸುಮಾರು ೧೨೦೦, ಮತ : ಬ್ರಾಹ್ಮಣ, ಗ್ರಂಥ : ಜಗನ್ನಾಥ ವಿಜಯ, ರಸಕಲಿಕೆ.
೧೩. ಆಗ್ಗಳ : ಕಾಲ : ಸುಮಾರು ೧೨೦೦, ಮತ : ಜೈನ, ಗ್ರಂಥ : ಚಂದ್ರಪ್ರಭಪುರಾಣ, ರೂಪಸ್ತವನಮಣಿಪ್ರವಾಳ, ಜಿನಸ್ಥಾನಸ್ತವನ.
೧೪. ಆಚಣ್ಣ: ಕಾಲ : ಸುಮಾರು ೧೨೦೦, ಮತ : ಶೈವ , ಗ್ರಂಥ : ವರ್ಧಮಾನಪುರಾಣ, ಶ್ರೀಪದಾಶೀತಿ.
೧೫. ಕವಿಕಾಮ : ಕಾಲ : ಸುಮಾರು ೧೨೦೦, ಮತ : ಜೈನ, ಗ್ರಂಥ: ಶೃಂಗಾರರತ್ನಾಕರ.
೧೬. ಬಂಧುವರ್ಮ: ಕಾಲ : ಸುಮಾರು ೧೨೦೦, ಮತ : ಜೈನ, ಗ್ರಂಥ: ಹರಿವಂಶಾಭ್ಯುದಯ, ಜೀವ ಸಂಭೋಧನೆ.
೧೭. ದೇವಕವಿ: ಕಾಲ: ಸುಮಾರು : ೧೨೨೫, ಮತ : ಬ್ರಾಹ್ಮಣ, ಗ್ರಂಥ: ಕುಸುಮಾವಳಿ.
೧೮. ಪಾರ್ಶ್ವಪಂಡಿ: ಕಾಲ : ಸುಮಾರು : ೧೨೨೫, ಮತ : ಜೈನ, ಗ್ರಂಥ : ಪಾರ್ಶ್ವನಾಥಪುರಾಣ.
೧೯. ಜನ್ನ : ಕಾಲ :ಸುಮಾರು ೧೨೨೫, ಮತ : ಜೈನ, ಗ್ರಂಥ: ಅನಂತನಾಥಪುರಾಣ, ಯಶೋಧರಚರಿತೆ, ಅನುಭವಮುಕುರ.
೨೦. ಸೋಮರಾಜ : ಕಾಲ : ಸುಮಾರು ೧೨೨೫, ಮತ : ವೀರಶೈವ. ಗ್ರಂಥ : ಶೃಂಗಾರಸಾರ (ಉದ್ಭಟಕಾವ್ಯ)
೨೧. ೨ನೆಯ ಗುಣವರ್ಮ:ಕಾಲ : ಸುಮಾರು ೧೨೨೫, ಮತ : ಜೈನ, ಗ್ರಂಥ : ಪುಷ್ಪದಂತಪುರಾಣ.
೨೨. ಕಮಲಭವ : ಕಾಲ : ಸುಮಾರು ೧೨೨೫, ಮತ : ಜೈನ, ಗ್ರಂಥ : ಶಾಂತೀಶ್ವರಪುರಾಣ.
೨೩. ಆಂಡಯ್ಯ: ಕಾಲ : ಸುಮಾರು ೧೨೨೫, ಮತ : ಜೈನ, ಗ್ರಂಥ : ಕಬ್ಬಿಗರಕಾವ.
೨೪. ಮಲ್ಲಿಕಾರ್ಜುನ : ಕಾಲ : ಸುಮಾರು ೧೨೫೦, ಮತ : ಜೈನ, ಗ್ರಂಥ : ಸೂಕ್ತಿಸುಧಾರ್ಣವ.
೨೫. ಮಹಾಬಲಕವಿ: ಕಾಲ : ಸುಮಾರು ೧೨೫೦, ಮತ : ಜೈನ, ಗ್ರಂಥ : ನೇಮಿನಾಥಪುರಾಣ.
೨೬. ಕೇಶಿರಾಜ: ಕಾಲ : ಸುಮಾರು ೧೨೭೫ , ಮತ : ಜೈನ, ಗ್ರಂಥ : ಶಬ್ಧಮಣಿದರ್ಪಣ
೨೭. ಕುಮುದೇಂದು:ಕಾಲ : ಸುಮಾರು ೧೨೭೫, ಮತ : ಜೈನ, ಗ್ರಂಥ : ಕುಮುದೇಂದು ರಾಮಾಯಣ, ಪ್ರತಿಷ್ಟಕಲ್ಪಟಿಪ್ಪಣ.
೨೮. ನರಹರಿತೀರ್ಥ: ಕಾಲ : ಸುಮಾರು ೧೨೭೫, ಮತ : ಬ್ರಾಹ್ಮಣ, ಗ್ರಂಥ : ಕೀರ್ತನೆಗಳು
೨೯. ರಟ್ಟಕವಿ (ಆರ್ಹದ್ದಾಸ) : ಕಾಲ : ಸುಮಾರು ೧೩೦೦, ಮತ : ಜೈನ, ಗ್ರಂಥ : ರತ್ತಮತ (ಅಕ್ಕರ, ತ್ರಿಪದಿ)
೩೦. ಚೌಂಡರಸ : ಕಾಲ : ಸುಮಾರು ೧೩೦೦, ಮತ : ಬ್ರಾಹ್ಮಣ, ಗ್ರಂಥ : ಅಭಿನವದಶಕುಮಾರಚರಿತೆ, ನಳಚರಿತ್ರೆ.
೩೧. ಹಸ್ತಿಮಲ್ಲ :ಕಾಲ : ಸುಮಾರು ೧೩೦೦, ಮತ : ಜೈನ, ಗ್ರಂಥ : ಪೂರ್ವಪುರಾಣ
೩೨. ಪಾಲ್ಕುರಿಕೆ ಸೋಮನಾಥ: ಕಾಲ : ಸುಮಾರು ೧೩೦೦, ಮತ : ವೀರಶೈವ, ಗ್ರಂಥ : ಶೀಲಸಂಪಾದನೆ, ಸಹಸ್ರಗಣನಾಮ, ಪಂಚರತ್ನ, ಸದ್ಗುರುರಗಳೆ, ಚೆನ್ನಬಸವರಗಳೆ, ಗಂಗೋತ್ಪತ್ತಿರಗಳೆ.
೩೩. ನಾಗರಾಜ: ಕಾಲ : ಸುಮಾರು ೧೩೫೦, ಮತ : ಜೈನ, ಗ್ರಂಥ : ಪುಣ್ಯಸ್ರಾವ
೩೪. ವೃತ್ತವಿಲಾಸ: ಕಾಲ : ಸುಮಾರು ೧೩೫೦, ಮತ : ಜೈನ, ಗ್ರಂಥ : ಧರ್ಮಪರೀಕ್ಷೆ.
೩೫. ಮಂಗರಾಜ - ೧ : ಕಾಲ : ಸುಮಾರು ೧೩೫೨,ಮತ : ಜೈನ, ಗ್ರಂಥ : ಖಗೇಂದ್ರಮಣಿದರ್ಪಣ
೩೬. ಭೀಮಕವಿ : ಕಾಲ : ಸುಮಾರು ೧೪೦೦, ಮತ : ವೀರಶೈವ, ಗ್ರಂಥ : ಬಸವಪುರಾಣ, ಭೀಮಕವೀಶ್ವರರಗಳೆ, ಭೃಂಗಿದಂಡಕ.
೩೭. ಮಧುರ : ಕಾಲ : ಸುಮಾರು ೧೪೦೦, ಮತ : ಜೈನ, ಗ್ರಂಥ : ಧರ್ಮನಾಥಪುರಾಣ, ಗೊಮ್ಮಟಸ್ತುತಿಯಷ್ಟಕ.
೩೮. ಪದ್ಮಣಾಂಕ : ಕಾಲ : ಸುಮಾರು ೧೪೦೦, ಮತ : ವೀರಶೈವ, ಗ್ರಂಥ : ಪದ್ಮರಾಜಪುರಾಣ.
೩೯. ಆಯತವರ್ಮ : ಕಾಲಲ : ಸುಮಾರು ೧೪೦೦, ಮತ : ಜೈನ, ಗ್ರಂಥ : ಕನ್ನಡರತ್ನದಂಡಕ
೪೦. ಪುಳುಗೆರೆಯ ಸೋಮನಾಥ : ಕಾಲ : ಸುಮಾರು ೧೪೦೦, ಮತ : ವೀರಶೈವ, ಗ್ರಂಥ : ಸೋಮೇಶ್ವರಶತಕ.